Sunday, March 23, 2008

ಉಡುಪಿ ಪ್ರವಾಸ









ತುಂಬಾ ದಿನದಿಂದ ಎಲ್ಲಾದ್ರು ಹೋಗೋಣ ಅಂತ ಅನ್ಕೊಳ್ತಾನೆ ಇದ್ವಿ ನಾನು ರೇಖಾ ನಾಗರಾಜ್ ಮತ್ತೆ ಶ್ಯಾಮಾ , ಕೊನೆಗೆ ಶ್ಯಾಮಾ ಉಡುಪಿ ಶ್ರೀ ಕೃಷ್ಣನ ಭಕ್ತೆ ಅದಿಕ್ಕೆ ಉಡುಪಿಗೆ ಹೋಗೋಣ ಅಂತ fix ಆಯ್ತು ... ಅದೇ ದಾರೀಲಿ dharmastala , ಕುಕ್ಕೆ ಸುಬ್ರಮಣ್ಯ ಇರೋದ್ರಿಂದ ಅಲ್ಲಿಗೂ ಹೋದ್ರೆ ಆಯ್ತು ಅನ್ಕೊಂದ್ವಿ ...
ಎಲ್ಲಾ decide ಆಯ್ತು bus du booking ಕೂಡಾ ಆಯ್ತು, ಯಾವಾಗಲು ಆದಂಗೆ buss (ನಾವು ನಾಗರಾಜ್ ನಾ buss ಅಂತ ಕರಿತೀವಿ ) ಮತ್ತೆ rekha book ಮಾಡಿದ್ರು...
So ರಾತ್ರಿ 10:30 ಗೆ bus ಅಲ್ಲಿ ಎಲ್ಲಾರು ಇದ್ವಿ ... ಹಾಗೆ ನಾವು ಬಂದಿದ್ ತಕ್ಷಣ ಬಸ್ ಕೂಡಾ ಹೊರಡ್ತು , ಬಸ್ ಹೋಗ್ತಾ ನಿದ್ದೆ ಬರೋ ಹಾಗೆ ಆಯ್ತು ... ಹಾಗೆ ನಿದ್ದೆ ಅಲೇಲಿ ತೇಲುತ ಇದ್ದೆ, sudden ಅಗೀ ಎಚ್ಚರಕೆ ಆಯ್ತು, ನೋಡಿದ್ರೆ bus ನಿಂತಿದೆ ... oh sakleshpur ದಲ್ಲಿ ನಿಲ್ಲಸಿದ್ರು... ಸುಮಾರ್ ರಾತ್ರಿ ಒಂದ್ ಗಂಟೆ ಆಗಿತ್ತು ... ಇನ್ನು ಎಲ್ಲಾರು ಕೆಳಗೆ ಇಳ್ದ್ವಿ... Buss ಬಂದು ಕೇಳದ ಏನಾದ್ರು ಕುಡಿತೀರಾ ಅಂತ, ನಾವು ಸ್ವಲ್ಪ style ಹೊಡಿದ್ವಿ "ರಾತ್ರಿ ನಾ no way ಅಂತ"
ಅವನು ಸರೇ ಅಂತ ಹೋಗಿ ಬಿಸಿ ಬಿಸಿ ಮೆಣಸಿನಕಾಯಿ ತಂದ, ನಮ್ಗೆ control ಆಗಲೇ ಇಲ್ಲಾ... ಅಲ್ಲಿಗೂ rekha ಇನ್ನೂ style ಹೊಡಿತಾನೆ ಇದ್ಲು ಅಷ್ಟೊತ್ತಿಗೆ ನಾನು ಶ್ಯಾಮಾ ಬಾಯ್ಗೆ ಒಂದ್ ಒಂದ್ ಮೆಣಸಿನಕಾಯಿ ತುರಕೊಂಡಿದ್ವಿ ಬಾಯಲ್ಲಿ .... ತುಂಬಾ ಚೆನ್ನಾಗಿತ್ತು ಚಳಿಲಿ ಮೆಣಸಿನಕಾಯಿ ಮತ್ತೆ ಕಾಫಿ ಆಹಾ ಆಹಾ ಆಹಾ
ಬೆಳ್ಲೆಗೆ ಆಯ್ತು, bus ಅಲ್ಲಿ ಕೂತು ಕೂತು ಸಾಕಾಯ್ತು ಯಾವಾಗ ಬರುತಪ್ಪ ಅಂತ ಕಾಯಥನೆ ಇದ್ವಿ, ಪ್ರತಿ ಊರ್ ಬಂದ್ರೂ ಇದೇನಾ ಉಡುಪಿ ಅನ್ನೋ ಹಾಗೆ ಆಗಿತ್ತು .... ರಸ್ತೆ ಬೇರೇ ಸರಿ ಇಲ್ಲ... ತುಂಬಾ ಕಷ್ಟ ಆಯ್ತು.... ಕೊನೆಗೂ ತಲಪಿದ್ವಿ ನಾವು ಅನ್ಕೊಂಡಿದ್ ಜಾಗ ನಾ...
ಮತ್ತೆ problem ಬಂತು ಒಂದು ಹೋಟೆಲ್ ಕೂಡಾ ಖಾಲಿ ಇಲ್ಲ, ಎನ್ ಮಾಡೋದು ಅಂತ ಹುಡುಕಿ ಹುಡುಕಿ ಸಾಕಾಯ್ತು , ಕೊನೆಗೆ ಸಿಕ್ತು ಒಂದು ಒಳ್ಳೆ MNC ತರ ಇತ್ತು ನೋಡೋಕೆ (summer park) ... ಹೋಗಿ ಕೇಳಿದ್ವಿ ಏನೇನೋ ದೊಡ್ಡ ಮಾತ ಆದಮೇಲೆ ಸಿಗ್ತು ಒಂದ್ room...
ಸರೆ ಅಂತ ಅವತ್ತು saint maries island ಗೆ ಹೋಗೋಣ ಅಂತ plan ಮಾಡಿದ್ವಿ , ಸರೆ ಬೇಗ ಬೇಗ ready ಆಗಿ ಹೊರಟ್ವಿ ಸುಮಾರ್ ಮಧ್ಯಾನ ಆಗಿತ್ತು 1:30 , ಹೋಗಿ ಕೇಳಿದ್ರೆ ಈಗಾ ತಾನೆ ಒಂದ್ boat ಹೋಯ್ತು , ನೀವು ಇನ್ನು 30 ಜನ ಬರೋ ತನಕ ಕಾಯಬೇಕು ಅಂತ ಕೇಳಿ ಸುಸ್ತು ಅದ್ವಿ, ಯಾಕಂದ್ರೆ ಅಲ್ಲಿ ಯಾರೂ ಜನನೇ ಕಾಣಿಸಲೇ ಇಲ್ಲ., ಎನ್ ಮಾಡೋದು ಅಂತ , ನೋಡೋಣ ಸ್ವಲ್ಪ ಹೊತ್ತು ಕಾದು ಅಂತ ಅಲ್ಲೇ ಕೂತ್ವಿ photo ಅದು ಇದು ಅಂತ ತಕ್ಕೊಂಡ್ ಏನೋ time pass ಮಾಡ್ತಾ ಇದ್ವಿ...
ಇನ್ನೇನು ಹೊರಡೋದು ಅನ್ಕೊಂಡಾಗ ಬಂದ್ರೂ ಜನ, almost more than 30 ,ತುಂಬಾ ಖುಷಿ ಆಯ್ತು ...ಅಮೇಲೆ ಎಲ್ಲಾರು ಹೋದ್ವಿ Island ಗೆ .
Island was just supperrr , ಹೇಗಿತ್ತು ಗೊತ್ತಾ ಅದು kaho na pyar hai ಅಲ್ಲಿ hrithik ಮತ್ತೆ amisha ಕಳ್ದೊಗಿರ್ತರೆ ಅಲ್ವಾ ಆ ತರ..

We just enjoyed a lot there...

ಯಾರಾದ್ರು ಉಡುಪಿ ಗೆ ಹೋದ್ರೆ ಸೈಂಟ್ ಮರಿಎಸ್ ಇಸ್ಲಂದ್ ಹೋಗಿ ಬರೋದನ್ನ ಮಾತ್ರ ಮರೀಬೇಡಿ

6 comments:

ಶ್ಯಾಮಾ said...

ಚೆನ್ನಾಗಿ ಬರ್ದಿದೀಯಾ ಕಣೆ. ಮತ್ತೊಂದು ಸಲ ಎಲ್ಲ ನೆನಪಾಯ್ತು.:) ಆದ್ರೂ ಇನ್ನೂ ಬರಿಬಹುದಿತ್ತು.
ಬಸ್ಸಲ್ಲಿ ಹೋಗಿದ್ದರ experience,
ಸ್ನಾನ ಯಾರು ಮೊದ್ಲು ಮಾಡೋದು ಅಂತ ಕಚ್ಚಾಡಿದ್ದು. ಟಿವಿ ನೋಡಿದ್ದು, I Land ಅಲ್ಲಿ ಮಾಡಿದ ಮಸ್ತಿಗಳು,ನಾನು ತಪಸ್ಸು ಮಾಡಿದ್ದು ಕಲ್ಲಿನ ಮೇಲೆ ;),ದೇವಸ್ಥಾನಕ್ಕೆ ಸಂಜೆ ಹೋಗಿ ದೇವರನ್ನು ನೋಡಿದ್ದು, ನಾನು ಫುಲ್ ಸುಸ್ತಾಗಿ ಕುಂಭಕರ್ಣನ relative ಅನ್ನೋಥರ ನಿದ್ದೆ ಮಾಡಿದ್ದು :),
next day ಬೆಳಿಗ್ಗೆ ನಮ್ಮನ್ನು ಎಬ್ಸಕ್ಕೆ ಬುಸ್ ಕಷ್ಟ ಪಟ್ಟಿದ್ದು, ಕುಕ್ಕೆ ಗೆ ಹೋಗುವಾಗ ಬಸ್ಸಲ್ಲಿ ಮಾಡಿದ ಮಸ್ತಿ, ಫೋಟೋ ಗೆ ಪೋಸ್ ಕೊಟ್ಟಿದ್ದು, ರೇಖ ನಾವು ಹೇಳಿದ ಡ್ರೆಸ್ ಹಾಕ್ಕೊಂನ್ಡು ಬಂದಿರ್ಲಿಲ್ಲಾ ಅಂತ ಅವಳನ್ನು ಸುಮ್ ಸುಮ್ನೆ ಬೈದು ಕಾಡಿಸಿದ್ದು, ಬುಸ್ ನ ಸುಮ್ ಸುಮ್ನೆ irritate ಮಾಡ್ತಿದ್ದಿದ್ದು, ಧರ್ಮಸ್ಥಳದಲ್ಲಿ ನಾನು ಟೆನ್ಶನ್ ಮಾಡ್ಕೊಂಡು ನೀರಿಗೆ ಇಳಿಲಿಲ್ವಲ್ಲಾ ಅದನ್ನಾ ಬರಿದೇ ಇದ್ದಿದ್ದು ಒಳ್ಳೇದೇ ಆಯ್ತು ;)
ಮತ್ತೂ ಇನ್ನೂ ಏನೇನೋ ಇವನ್ನೆಲ್ಲಾ ಸೇರ್ಸಿ ಬರ್ದಿದ್ರೆ ಇನ್ನೂ ಸೂಪರ್
ಆಗಿರೋದು.

Anyways ಇಷ್ಟೊಳ್ಳೆ memories naa refresh ಮಾಡಿದ್ದಕ್ಕೆ thanks :)

ಸ್ಮಿತಾ said...

ಥ್ಯಾಂಕ್ಸ್ ಕಣೆ , ಅಷ್ಟ್ ಬರಿಯೋಷ್ಟೊತ್ತಿಗೆ ಸುಸ್ಥ್ ಆಯ್ತು , ನೀನ್ ಬರಿ ಮುಂದಿನದು ... ಅದೆಲ್ಲ ಬರೀಬೇಕು ಅನ್ನಿಸ್ತು , ಅದ್ರೆ ಹೇಗ್ ಬರೀಬೇಕು ಅಂತ ಗೊತ್ತಾಗ್ಲಿಲ್ಲ .

Anonymous said...

ನಿಮ್ಮ ಪ್ರಯಾಣದ ಕಥೆ ನೋಡಿ ಖುಷಿಯಾಯ್ತು... ನಮ್ಮೂರಲ್ಲಿ ಬಂದು ನೀವು ತುಂಬಾನೇ ಎಂಜಾಯ್ ಮಾಡಿದ್ದೀರಲ್ವಾ... ಹ್ಹೂಂ. ನೀವು ಹೊರಟಿದ್ದು ಎಲ್ಲಿಂದ ಅನ್ನೋದನ್ನಾದ್ರೂ ಬರೀಬೇಕಿತ್ತು (ಓದ್ಬೇಕಾದ್ರೆ ಗೊತ್ತಾಗುತ್ತೆ) ಆದ್ರೂ ಹೇಳ್ದೆ. ಇರಲಿ. ತುಂಬಾನೆ ಖುಷಿ ಆಯ್ತು. ನಾನು ನನ್ನ ಫ್ರೆಂಡ್ಸು ಎಲ್ಲಾ ಜೊತೇಲಿ ಟೂರ್ ಹೋಗ್ತಿದ್ದಿದ್ದು ನೆನಪಾಯ್ತು. ಹ್ಹಾಂ ನಾನು ಮೊನ್ನೆ ನಮ್ಮೂರಿಗೆ (ಕಾಸರಗೋಡು)ಹೋಗಿ ಬಂದೆ ಒಂದಷ್ಟು ರಿಲ್ಯಾಕ್ಸ್ ಆಯ್ತು. ಆ ನೆನಪೆಲ್ಲಾ ನಿಮ್ಮ ಬರಹ ಓದುವಾಗ ಮತ್ತೆ ನೆನಪಾಯ್ತು. ಚೆನ್ನಾಗಿದೆ. ನಿಮ್ಮೆಲ್ಲಾ ತಂಡಕ್ಕೆ ಶುಭಾಷಯಗಳು...
ಹರೀಶ್ ಕೆ. ಆದೂರು.

ಸ್ಮಿತಾ said...

ಹರೀಶ್ ತುಂಬಾ ಥ್ಯಾಂಕ್ಸ್ , ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ..

Anonymous said...

Dear Smitha,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends

Tamasoma Jyothirgamaya said...
This comment has been removed by the author.